Book-Summary - ಆವರಣ (Aavarana / The Viel)
- Author: S L Bhyrappa
- GoodReads: ಆವರಣ (Aavarana / The Viel)
ಭೈರಪ್ಪರವರ ಕೆಲವೊಂದು ಕೃತಿಗಳನ್ನ ಓದಿದ್ದೆ, ಒಂದಕ್ಕಿಂತ ಇನ್ನೊಂದು ಬಹಳ ವಿಬಿನ್ನ. ಆವರಣವನ್ನು ಸರಳವಾಗಿ ಹೇಳುವುದಾದರೆ - ಲಕ್ಷ್ಮಿ ಹೇಗೆ ಈಗಿನ ಎಡ ಪಂತೀಯ ಪ್ರಭಾವದಿಂದ ರಜ಼ೀಯ ಆಗ್ತಾಳೆ ಮತ್ತೆ ಮುಂದೆ ರಜ಼ೀಯ ಹಿಂದಿನ ಭಾರತ ಮತ್ತು ಇಸ್ಲಾಂ ಧಮ೯ದ ಇತಿಹಾಸವನ್ನು ಅರಿತು ಪುನ: ಲಕ್ಷ್ಮಿ ಆಗುತ್ತಾಳೆ.
ಭಾರತ ದೇಶದ ಮೇಲೆ ಇಸ್ಲಾಂ ಧಮ೯ದ ಸಾಮ್ರಾಜ್ಯಗಳು ಬಹಳ ವಷ೯ದ ಸತತ ಯುದ್ಧವನ್ನು ಮಾಡಿ ಭಾರತದಲ್ಲಿ ತಮ್ಮ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು ಉದಹರಣೆಗೆ ದೆಲ್ಲಿ ಸುಲ್ತಾನೇಟ್, ಮೊಗಲ್, ಇತ್ಯಾದಿ. ಈ ರಾಜ್ಯಗಳು ಹಿಂದುಗಳ ಮೇಲೆ ಬಹಳ ದೌಜ೯ನ್ಯವನ್ನು ಮಾಡುತ್ತಾರೆ. ಭೈರಪ್ಪನವರು ಆವರಣದಲ್ಲಿ ಎರಡು ಕಥೆಗಳನ್ನು (ಕಥೆ ಒಳಗೊಂದು ಕಥೆ) ಹೇಳಿದ್ದಾರೆ. ಕಥೆಗಳು ಕಾಲ್ಪನಿಕವಾದರು ಅದರಲ್ಲಿ ಬರುವ ಎಲ್ಲಾ ಸನ್ನಿವೇಷಗಳು ನಿಜ ಜೀವನದಲ್ಲಿ ನೆಡೆಯುತ್ತಿರುವ ಸನ್ನಿವೇಷಗಳಿಗೆ ಹೊಂದುತ್ತದೆ. ಲಕ್ಷ್ಮಿ - ರಜ಼ೀಯ ಕಥೆ ಈಗಿನ ಎಡ ಪಂತೀಯರು ಹೇಗೆ ಮುಸ್ಲೀಂ ರಾಜ್ಯದ ಕ್ರೂರತೆಯನ್ನು ಮುಚ್ಚುತ್ತುವೆ, ದೇಶದ ಎಲ್ಲ ದುವೆ೯ವಸ್ತೆಗೆ ಹಿಂದು ಧಮ೯ದ ಸಾಂಪ್ರದಾಯಕತೆ ಹಾಗು ಹಿಂದು ಸಂಸ್ಕೃತಿಯೇ ಕಾರಣ ಎಂದು ಹಿಂದು ಧಮ೯ದ ನ್ಯೂನತೆಯನ್ನು ಆವರಣವಾಗಿ ಉಪಯೋಗಿಸಿ ಮುಸ್ಲಿಂ ರಾಜ್ಯದ ಕ್ರೂರತೆಯನ್ನು ಮುಚ್ಚುತ್ತಾರೆಂಬುದನ್ನು ತೋರಿಸುತ್ತದೆ. ಲಕ್ಷ್ಮಿ - ರಜ಼ೀಯ ಬರೆಯುವ ಐತಿಹಾಸಿಕ ಕಥೆ ಮೊಗಲ್ ರಾಜ ಔರಂಗಜೇಬನ ಸಮಯದಲ್ಲಿ ನೆಡೆಯುವ ಒಂದು ಕಾಲ್ಪನಿಕ ಕಥೆ. ಇದು ಕಾಲ್ಪನಿಕವಾದರು ಆಗಿನ ಕಾಲದ ಸ್ಥಿತಿಗಳ ಆಧಾರಿತವಾಗಿದ್ದು ಆಗಿನ ಹಿಂದು ಧ೯ಮದ ಜನರ ಮೇಲೆ ನೆಡೆದ ದುರಾಡಳಿತ ಮತ್ತು ದೌಜ೯ನ್ಯವನ್ನು ಎತ್ತಿ ತೋರಿಸುತ್ತದೆ.
ಭೈರಪ್ಪನವರು ಎಲ್ಲೂ ಭೀಕರತೆಯನ್ನು ಮುಚ್ಚಲು ಪ್ರಯತ್ನ ಪಡದೆ ಹಾಗೆಯೆ ಎಲ್ಲವನ್ನು ತೆರೆದಿಡುತ್ತಾರೆ. ಹೇಗೆ ಇತಿಹಾಸವನ್ನು ತಿವುಚುತ್ತಾರೆ ತಮ್ಮ ಲಾಭಕ್ಕಾಗಿ ಎಂದು ಉತ್ತಮವಾಗಿ ತೋರಿಸಿ ಕೊಟ್ಟಿದ್ದಾರೆ. ಇತಿಹಾಸ ಆಧಾರಿತ ಪುಸ್ತಕವನ್ನು ಈರೀತಿಯಾಗಿ ವಿಬಿನ್ನ ದೃಷ್ಟಿಕೋಣದಿಂದಲೂ ಬರೆಯಬೊಹುದೆ ಯಂದೆನಿಸುವುದು ಮಾತ್ರ ಖಂಡಿತ. ನಿಜ್ಜಕ್ಕೂ ಇದ್ದನ್ನು ಓದಿದ ಮೇಲೆ ನಮ್ಮ ಇತಿಹಾಸದ ಮೇಲಿರುವ ಒಂದು ಆವರಣ ತೆಗೆದ ಹಾಗಾಗುತ್ತದೆ. ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ.