Home

Book-Summary - ತಬ್ಬಲಿಯು ನೀನಾದೆ ಮಗನೆ (Orphaned)

ಎಂಥ ಒಂದು ಅದ್ಬುತವಾದ ಕಥೆ. ಎಷ್ಟೋ ಬಾರಿ ಈ ಪ್ರಶ್ನೆ ಮನಸ್ಸಿಗೆ ಬಂದಿದೆ - ಗೋ ಹತ್ಯೆನ ಏಕೆ ಪಾಪ? ಎಷ್ಟೋ ಜನ ಮಾಂಸ ಸೇವನೆ ಮಾಡ್ತಾರೆ. ಬೇರೆ ಪ್ರಾಣಿಯದು ಮಾಂಸನೇ ಅಲ್ವ. ಇವೆಲ್ಲಾ ಹಿಂದಿನ ಕಾಲದ ಮೂಡ ನಂಬಿಕೆ ಅಷ್ಟೆನ? ಹಾಗಾದರೆ ಇನ್ನೂ ಏಕೆ ಆಚರಣೆಯನ್ನು ಮುಂದುವರಿಸಬೇಕು? ಇದನ್ನೆಲ್ಲ ನಾವು ವೈಙಾನಿಕವಾಗಿ ಪರೀಕ್ಷಿಸಿ , ಅದು ವೈಙಾನಿಕವಾಗಿ ಸರಿಹೊಂದಿದರೆ ಮಾತ್ರ ಈ ಆಚರಣೆಗಳನ್ನ ಮತ್ತು ಪದ್ದತಿಗಳನ್ನ ಮುಂದುವರಿಸಿ ಇಲ್ಲಂದ್ರೆ ಇವು ಮೂಡ ನಂಬಿಕೆಗಳು ಅಂತ ತ್ಯಜಿಸಬೇಕೆ?

ಈ ಎಲ್ಲಾ ಪ್ರಶ್ನೆಗಳಿಗೆ ಪೂತಿ೯ ಉತ್ತರಸಿಗದ್ದಿದರು ಈ ವಿಷಯಗಳ ಬಗ್ಗೆ ಯೋಚ್ಚಿಸೋ ಹಾಗೆ ಮಾಡುತ್ತೆ ಈ ಪುಸ್ತಕ. ನಮ್ಮಂತ ಶಾಲೆಗೆ ಹೋಗಿ ಬುದ್ದಿವಂತವರಾದವರಿಗೆ ಎಂದೂ ಶಾಲೆಯ ಮೆಟ್ಟಿಲು ಹತ್ತದ ಗೌಡಜ್ಜನ ಜ್ಞಾನ ಎಷ್ಟೋ ಉತ್ತಮವಾದುದು. ವೆಂಕಟರಮಣನ ಹಾಗೂ ಅವನ ತಂದೆಯ ಶಾಸ್ತ್ರದ ವಿವರಣೆಗಳು ತಿಳಿಸಿಕೊಡುವ ವಿಷಯಗಳು ಬಹಳ. ತಾಯವ್ವನ ಮೌನದ ಮಾತುಗಳು, ಹಿಲ್ಡಳ ಪ್ರಶ್ನೆಗಳು ಎಲ್ಲವೂ ಎಷ್ಟೊಂದನ್ನು ತಿಳಿಸಿಕೊಡುತ್ತದೆ.

ಪಾಶ್ಚತ್ಯ ಮತ್ತು ಭಾರತ್ತೀಯ ದೃಷ್ಟಿಕೋಣದಲ್ಲಿ ಎಷ್ಟೊಂದು ವೆತ್ಯಾಸಯಿದೆ. ಪಾಶ್ಚತ್ಯದ ಜನರಿಗೆ ಭಾರತದಲ್ಲಿ ಆಚರಿಸುವ ಎಲ್ಲ ಪದ್ದತಿಗಳು ಮೂಡನಂಬಿಕೆಯೆಂದು ಮೊದಲೆ ಮನಸ್ಸಿನಲ್ಲಿ ಘಡವಾಗಿ ಕೂತಿದೆ ಮತ್ತು ತಮ್ಮಲ್ಲಿಯೆ ವಿಜ್ಞಾನ ಹುಟ್ಟಿರಿವುದು ಎಂಬ ಮೂಡ ನಂಬಿಕೆಯೂವುಂಟು. ಪ್ರಕೃತಿಯಿರುವುದೆ ಮನುಷ್ಯನ ಉಪಯೋಗಕ್ಕೆಯೆಂಬ ದೃಶ್ಠಿಕೋಣ. ಇವೆಲ್ಲದಿರಿಂದ, ಅವರು ನಮ್ಮ ಸಂಸ್ಕೃತಿನ ಅಥ೯ ಮಾಡಿಕೊಳ್ಳಲು ಪ್ರಯತ್ನಸಿವುದಿಲ್ಲ, ಮೇಲಮಟ್ಟದಲ್ಲಿ ಪ್ರಯತ್ನ ಪಟ್ಟರೂ ಅದನ್ನ ತಪ್ಪೆಂದು ತೋರಿಸುವ ದೃಷ್ಟಿಯಲ್ಲೆ ಪ್ರಯತ್ನಿಸುತ್ತಾರೆ.

ಎಷ್ಟೋ ವಿಷಯಗಳಿಗೆ ಹಿಲ್ಡ ಮತ್ತು ಕಾಳಿಂಗನ ವಾದಯೆಂದರೆ - ಇವಕ್ಕೆ ವೆಜ್ಞಾನಿಕ ಪುರಾವೆ ಇಲ್ಲ ಅಥವ ಇದನ್ನು ಯಾಕೆ ಕೇವಲ ವೈಜ್ಞಾನಿಕ ದೃಶ್ಠಯಲ್ಲಿ ನೋಡಬಾರದು? ಪ್ರತಿ ಸಲ ನನಗೆ “absence of evidence is not the evidence of absence itself” ನೆನಪಾಗತ್ತಿತ್ತು. ಗೌಡಜ್ಜನ ಈ ಮಾತು ತುಂಬ ಹಿಡಿಸಿತ್ತು - “ಮೊದಲು ನಮ್ಮ ರೀತಿ ನೀತಿ ಆಚಾರ ವಿಚಾರ ಸಂಸ್ಕೃತಿನ ಕಲೀ ಬೇಕು. ನಂತರ ಇನ್ನಂದು ದೃಶ್ಠಿಕೋಣದ ವಿಚಾರಗಳ ಬಗ್ಗೆ ಓದ ಬೇಕು”

ಕೆಲ ಒಂದು ವಿಷಯಗಳಲ್ಲಿ ವೆಂಕಟರಮಣನ ಉತ್ತರಿಸುವ ರೀತಿ ಹಿಡಿಸಲ್ಲಿಲ್ಲ. ಸಮಾಧಾನವಾಗಿ ಉತ್ತರಿಸಬೊಹುದಿತ್ತೇನೊ.

ಒಂದು ಬಲಳ ಬೇಸರ ಅನಿಸಿತ್ತಂದರೆ, ಸ್ವತಂತ್ರದ ನಂತರ ಭರತ ಸಕಾ೯ರ ಹಿಂದು ಜೀವನ ರೀತಿಯನ್ನು ಕಿತ್ತುಹಾಕಲು ಬಹಳ ಪ್ರಯತ್ನ ಮಾಡುತ್ತೆ. ಸಕಾ೯ರದ ನೀತಿಗಳನ್ನ ಅಲ್ಲಿನ ಜನರಿಗೆ ಅನುಗುಣವಾಗಿ ರೂಪಿಸುವುದರ ಬದಲು ಪಾಶ್ಚತ್ಯರ ನೆರವಿಗೆ ಅನುಗುಣವಾಗಿ ನಿಮಿ೯ಸಿದರು. ಹೀಗೆ ಇನ್ನೊಬ್ಬರ ರೀತಿಗಳನ್ನ ನಮ್ಮ ಜನರ ಮೇಲೆ ಹೇರಿದಾಗ ಅವರಲ್ಲಿದ್ದ ಹಿಂದಿನ ಜ್ಞಾನವೆಲ್ಲ ವೆತ೯ ಮತ್ತೆ ಎಲ್ಲವನ್ನ ಹೊಸದಾಗಿ ಕಲಿಯಬೇಕು. ಒಟ್ಟನಲ್ಲಿ ಸಕಾ೯ರವೇ ತನ್ನ ಜನರನ್ನ ತಬ್ಬಲಿಯನ್ನರಾಗಿ ಮಾಡಿತು.

ಒಟ್ಟಿನಲ್ಲಿ ಓದಲೇಬೇಕಾದ ಕಥೆ.