Home

Book-Summary - ಬ್ರಹ್ಮಪುರಿಯ ಭಿಕ್ಷುಕ (Brahmapuriya Bhikshuka)

ಈ ಪುಸ್ತಕದಲ್ಲಿ ಗಣೇಶರವರು ಡಿ.ವಿ.ಜಿ.ಯವರ ಜೀವನದ ಕೆಲವೊಂದು ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕ ಓದುವ ಮುಂಚೆ, ಡಿ.ವಿ.ಜಿ.ಯವರು ಒಬ್ಬ ಮಹಾನ್ ಕವಿಯಂದು, ಅವರು ಮಂಕುತಿಮ್ಮನ ಕಗ್ಗವನ್ನು ರಚಿಸಿದ್ದಾರೆಯಂದು ತಿಳಿದಿತ್ತು ಅಷ್ಟೆ. ಈ ಪುಸ್ತಕ ಓದಿದ ಮೇಲೆ ಅವರ ಉತ್ತಮ ವೆಕ್ತಿತ್ವದ ಬಗ್ಗೆ ತಿಳಿದಿದ್ದು. ನಾವು ಎಷ್ಟೋಬಾರಿ ಸ್ವಲ್ಪ ಕ್ಲಿಷ್ಟವಾದ ಸನ್ನಿವೇಶ ಬಂದ ತಕ್ಷಣ, ನಮ್ಮ ನಿಯಮಗಳನ್ನು ಹಾಗೂ ಆದಷ೯ಗಳನ್ನು ಬಿಟ್ಟು, ಸುಲಬದ ದಾರಿ ಹಿಡಿಯುತ್ತೇವೆ ಅತ್ತವ ರಾಜೆ ಮಾಡ್ಕೋತೀವಿ. ಆದರೆ ಅವರು ಹಾಗಲ್ಲ, ಏನೇ ಸನ್ನಿವೇಶ ಬರಲಿ, ಅವರು ಹಾಕಿಕೊಂಡ ಜೀವನದ ನಿಯಮಗಳನ್ನ ಮೀರುತ್ತಿರಲಿಲ್ಲ. ಇನ್ನೊಂದು ವಿಚಾರ ನನಗೆ ಇಷ್ಟವಾಗಿದು ಅಂದರೆ, ಅವರು ಪು.ತಿ.ನ.ರವರಿಗೆ ಕೊಟ್ಟ ಸಲಹೆ. ಪು.ತಿ.ನ.ರವರು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಡಲು ಯೋಚಿಸುತಿದ್ದರು ಹಾಗು ಇದರ ಬಗ್ಗೆ ಡಿ.ವಿ.ಜಿ. ಅವರ ಅಭಿಪ್ರಾಯ ಕೇಳಿದರು. ಇದಕ್ಕೆ ಡಿ.ವಿ.ಜಿ.ಯವರು, ಪು.ತಿ.ನರವರಿಗೆ ತಮ್ಮ ಹೆಂಡತಿಗೆ ಮೊದಲು ವಿಚಾರವನ್ನು ತಿಳಿಸಿ, ಈ ನಿದಾ೯ರಕ್ಕೆ ಕಾರಣವಾದ ಆಲೋಚನೆಗಳನ್ನು ಹೆಂಡತಿಗೆ ವಿವರಿಸಿ, ಅವರ ಒಪ್ಪಿಗೆ ಮೇಲೆ ರಾಜಿನಾಮೆ ನೀಡಬೇಕೆಂಬ ಸಲಹೆ ನೀಡಿದರು. ಏಷ್ಟೋಬಾರಿ ನಾವು ನಮ್ಮಲಿರುವ ಆಲೋಚನೆಗಳನ್ನ ಇನ್ನೊಬ್ಬರಿಗೆ ವಿವರಿಸಿದಾಗ ಅದು ಸ್ಪಷ್ಟವಾಗುತ್ತದೆ, ಅದರಲ್ಲಿಯು ಹೆಂಡತಿಯಲ್ಲಿ ಹೇಳಿಕಂಡಲ್ಲಿ, ಅದರ ಪರ ವಿರುದ್ಧ ವಾದಗಳನ್ನು ಸ್ಪಷ್ಟವಾಗಿ ತಿಳಿಯಬೊಹುದು. ಮತ್ತಂದು ನೆಚ್ಚಿನ ಗುಣವೆಂದರೆ, ಅವರ ಹಾಸ್ಯ ಪ್ರವೃತಿ. ಎಂಥಹ ಗಂಭೀರ ಸಂದಭ೯ದಲ್ಲಿಯು ಹಾಸ್ಯ ಮಾಡಿ ಸ್ಥಿತಿಯನ್ನು ಹಗುರ ಮಾಡುತ್ತಿದ್ದರು. ಹೀಗೆ, ತಮ್ಮ ಹೆಂಡತಿಯೊಂದಿಗಿನ ಪ್ರಸಂಗಗಳು, ಮಗನ ಜೊತೆಗಿನ ವಿಚಾರ ವಿನಿಮಯ, ವಿಷ್ವೇಶ್ವರಯ್ಯ - ಮಿಜಾ಼೯ ಹಾಗೂ ಇನ್ನಿತರ ಗಣ್ಯ ವೆಕ್ತಿಗಳೊಂದಿಗಿನ ಮಾತುಕತೆ ಒಡನಾಟಗಳು ಎಲ್ಲವೂ ಬಹಳಷ್ಟು ಪಾಠಗಳನ್ನು ಹೇಳಿಕೊಡುತ್ತದೆ.