Home

Book-Summary - ಶಿಲಾಕುಲ ವಲಸೆ (Shilaakula Valase/Stoneage Migration)

ಗಣೇಶಯ್ಯನವರು ಸಹಜವಾಗಿ ಒಂದು ಐತಿಹಾಸಿಕ ವಿಷಯವನ್ನು ಈಗಿನ ಕಾಲದ ಕಾಲ್ಪನಿಕ ಪತ್ತೆದಾರಿ ಕಥೆಯ ಮೂಲಕ ತಿಳಿಸುತ್ತಾರೆ. ಶಿಲಾಕುಲ ವಲಸೆಯಲ್ಲಿ ತೆಗೆದುಕೊಂಡ ಐತಿಹಾಸಿಕ ವಿಷಯ ಸಿಂಧು ಸರಸ್ವತಿ ನಾಗರೀಕತೆ ಹಾಗೂ ಆಯ೯ನ್ನರ ದಾಳಿ ಎಂಬ ಸಿದ್ದಾಂತ . ನನಗಂತು ಈ ವಿಷಯಗಳಲ್ಲಿ ಬಹಳ ಆಸಕ್ತಿ. ಮೈಕೆಲ್ ಡಾನಿನೋರವರ ಪುಸ್ತಕ - “ಕಳೆದುಹೋದ ನದಿ: ಸರಸ್ವತಿಯ ಹಾದಿಯಲ್ಲಿ (The lost river: on the trail of the Saraswathi)” ಓದಿದ್ದೆ ಹಾಗೂ ಈ ವಿಷಯದ ಬಗ್ಗೆ ಹಲವಾರು ಉಪನ್ಯಾಸಗಳನ್ನು ಕೇಳಿದ್ದೇನೆ.

ತಮ್ಮ ಲಾಭಕ್ಕಾಗಿ ಪಾಶ್ಚಾತ್ಯರು ಈ ಸುಳ್ಳನ್ನು ಹಬ್ಬಸಿದರು - ಒಂದು ಐತಿಹಾಸಿಕ ಸತ್ಯವಾದ ಭಾರತ ಜನರಿಂದ ಹುಟ್ಟಿ ಬೆಳೆದ ಸಿಂಧು ಸರಸ್ವತಿ ನಾಗರೀಕತೆಯನ್ನು, ಇದು ಭಾರತದವರಿಂದ ಹುಟ್ಟಿರುವುದು ಅಲ್ಲ ಬದಲಿಗೆ ಪಶ್ಚಿಮದಿಂದ ಬಂದ ಜನರು (ಆಯ೯ರು) ಈ ನಾಗರಿಕತೆಯನ್ನು ಬೆಳೆಸಿದರು ಎನ್ನುವುದು. ಪಶ್ಚಿಮದಿಂದ ಬಂದ ಆಯ೯ರು ಸಂಸ್ಕೃತ ಭಾಷೆಯನ್ನು ಹೊತ್ತು ತಂದರು ಹಾಗೂ ವೇದ ಮತ್ತು ಪುರಾಣಗಳನ್ನು ಭಾರತದ ಸ್ವಂತ ಜನರು ರಚಿಸಿಲ್ಲ, ಬದಲಿಗೆ ಪಶ್ಚಿಮದಿಂದ ಬಂದ ಆಯ೯ರು ಬರೆದರು ಎನ್ನುವ ಕತೆಯನ್ನು ಕಟ್ಟಿದರು. ಆಯ೯ರು ಭಾರತದ ಸ್ವಂತ ಜನರನ್ನು ದಕ್ಷಿಣಕ್ಕೆ ಅಟ್ಟಿದರು, ಹೀಗೆ ಭಾರತದ ಮೂಲ ಜನರು ದ್ರವಿಡಿಯನ್ ಆದರೆಂದು , ಈ ಆಯ೯ರು ಕೊನೆಗೆ ಮೇಲು ಜಾತಿಯವರಾದರು ಮತ್ತು ಭಾರತದ ಮೂಲ ಜನರು ಕೆಳಜಾತಿಯವರಾದರು ಎಂದು ವಾದಿಸಿದರು. ಈ ಸುಳ್ಳನ್ನು ಆಂಗ್ಲರು ಆಯುಧವನ್ನಾಗಿಸಿ ತಾವೆ ಭಾರತದಲ್ಲಿ ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಪಠ್ಯಕ್ರಮಗಳಲ್ಲಿ ಇದನ್ನು ಅಳವಡಸಿದರು. ಭಾರತದ ಜನರ ಮನಸ್ಸಿನಲ್ಲಿ ತಮ್ಮ ಬಗ್ಗೆ ತಾವೇ ಕೀಳರಿಮೆ ಬೆಳೆಯುವಂತೆ, ಎಲ್ಲವು ಪಶ್ಚಿಮದಿಂದ ಬಂದಿರುವುದರಿಂದ ನಾವು ಅವರನ್ನೆ ಅನುಸರಿಸ ಬೇಕೆಂಬ ಭಾವನೆಯನ್ನೂ ಬೆಳೆಸಿದರು. ಮೇಳು ಕೀಳು, ಊತ್ತರ-ದಕ್ಷಿಣ ಹೀಗೆ ಹಲವಾರು ರೀತಿಯಲ್ಲಿ ಭಾರತದ ಜನರ ಮಧ್ಯ ಬಿರುಕ್ಕನ್ನು ಬಿತ್ತಿದರು. ಒಂದೆಡೆ ಇದನ್ನು ಬ್ರಿಟೀಷರು ಭಾರತೀಯರ ಮೇಲೆ ಅಧಿಕಾರ ಸ್ಥಾಪಿಸಲು ಉಪಯೋಗಿಸಿದರೆ, ಇನ್ನೊಂದೆಡೆ ಕ್ರಿಶ್ಚಿಯನ್ ಮಿಷನರಿಗಳು ಭಾರತೀಯರನ್ನು ಕ್ರಿಶ್ಚಿಯನ್ ಧಮ೯ಕ್ಕೆ ಮತಾಂತರ ಮಾಡುವುದಕ್ಕೆ ಉಪಯೋಗಿಸಿದರು.

ಈ ಎಲ್ಲಾ ವಿಷಯಗಳನ್ನ ತಮ್ಮ ಪತ್ತೆದಾರಿ ಕಥೆಯಲ್ಲಿ ಅದ್ಬುತವಾಗಿ ಅಳವಡಿಸಿದ್ದಾರೆ. ಕಥೆಯು ಕೊನೆ ಹಂತದಲ್ಲಿ ಸ್ವಲ್ಪ ಎಳೆದ ಹಾಗೆ ಅನ್ನಿಸಿದರು, ಶುರುವಿನಿಂದಲೂ ಕುತೂಹಲಕಾರಿಯಾಗಿ ಮೂಡಿಬಂದಿದೆ. ಮಹದೇವನ ಬಾಲ್ಯದ ಅನುಭವಗಳು ಮತ್ತು ಅಮೇರಿಕಾದ ಘಟನೆಗಳು ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತದೆ. ಪೂಜಾಳ ಪಾತ್ರವು ಪ್ರತಿಯೊಂದು ವಿಷಯವನ್ನು ಎಳೆ ಎಳೆಯಾಗಿ ವಿವರಿಸುವುದರಿಂದ ಹಲವಾರು ಐತಿಹಾಸಿಕ ವಿಷಯವನ್ನೂ ತಿಳಿಯುತ್ತೇವೆ. ಒಟ್ಟಿನಲ್ಲಿ ಒಳ್ಳೆಯ ಪುಸ್ತಕ, ಮುಂದೊಂದು ದಿನ ಈ ಪುಸ್ತಕ ಆಧಾರಿತ ಚಲನಚಿತ್ರ ಅಥವಾ ಕಥಾ ಸರಣಿ ರೂಪದಲ್ಲಿ ಬರಲಿ ಎಂಬ ಆಶಯ.